Bigg Boss Kannada Season 5 : week 5 ನಾಮಿನೇಷನ್ ಪ್ರಕ್ರಿಯೆ ಈ ಬಾರಿ ಬೇರೆ ರೀತಿಯಲ್ಲಿ | Filmibeat Kannada

2017-11-14 3,799

Bigg Boss Kannada 5: Week 5: Niveditha Gowda, Jaganath, Sihi Kahi Chandru, Ashita, Diwakar and Krishi are nominated for this week's elimination.


'ಬಿಗ್ ಬಾಸ್' ಮನೆಯಲ್ಲಿ ಬೆಂಕಿಗೆ ಬಿದ್ದ ಅತಿ ಹೆಚ್ಚು ಮುಖಗಳಿವು! 'ಬಿಗ್ ಬಾಸ್ ಕನ್ನಡ-5' ಕಾರ್ಯಕ್ರಮ ಯಶಸ್ವಿಯಾಗಿ 25 ದಿನಗಳನ್ನು ಪೂರೈಸಿದೆ. ನಾಲ್ಕು ವಾರಗಳ ಬಳಿಕ ಇದೇ ಮೊದಲ ಬಾರಿಗೆ 'ಬಿಗ್ ಬಾಸ್' ಮನೆಯಲ್ಲಿ ಓಪನ್ ನಾಮಿನೇಷನ್ ಪ್ರಕ್ರಿಯೆ ನಡೆಯಿತು. ಎಂದಿನ ಹಾಗೆ ಕನ್ಫೆಶನ್ ರೂಮ್ ಒಳಗೆ ಈ ಬಾರಿ ನಾಮಿನೇಷನ್ ಪ್ರಕ್ರಿಯೆ ನಡೆಯಲಿಲ್ಲ. ಬದಲಾಗಿ, ಗಾರ್ಡನ್ ಏರಿಯಾದಲ್ಲಿ 'ಬಿಗ್ ಬಾಸ್' ಅಗ್ನಿಕುಂಡ ಇರಿಸಿದ್ದರು. ಪ್ರತಿಯೊಬ್ಬ ಸ್ಪರ್ಧಿ ಕೂಡ ತಾವು ನಾಮಿನೇಟ್ ಮಾಡಲು ಇಚ್ಛಿಸುವ ಇಬ್ಬರು ಸದಸ್ಯರ ಭಾವಚಿತ್ರಗಳಿಂದ ನಾಲ್ಕು ಬ್ಲಾಕ್ ಗಳನ್ನು ತೆಗೆದುಕೊಂಡು ಬೆಂಕಿಗೆ ಹಾಕಬೇಕಿತ್ತು. ಮೊದಲಿಗೆ, ಓಪನ್ ನಾಮಿನೇಷನ್ ನಡೆದದ್ದು ಇದೇ ಮೊದಲ ಬಾರಿಗೆ.! ಅದರಲ್ಲೂ, ಭಾವಚಿತ್ರಗಳನ್ನ ಬೆಂಕಿಗೆ ಹಾಕಬೇಕಾಗಿದ್ರಿಂದ ಸ್ಪರ್ಧಿಗಳಿಗೆ ನುಂಗಲಾರದ ಬಿಸಿ ತುಪ್ಪವಾಗಿ ಪರಿಣಮಿಸಿತು. ಐದನೇ ವಾರದ ನಾಮಿನೇಷನ್ ಪ್ರಕ್ರಿಯೆಯಲ್ಲಿ ಬೆಂಕಿಗೆ ಬಿದ್ದ ಅತಿ ಹೆಚ್ಚು ಮುಖಗಳ ಪರಿಚಯ ಮಾಡಿಸ್ತೀವಿ ಬನ್ನಿ....

Videos similaires